ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಸೆಪ್ಟೆಂಬರ್ 17, 2011

ಇದು ಬೆಳಗಾವಿಯ ಒಂದು ಆಕರ್ಷಣೆ


ಬೆಳಗಾವಿ ಅಂದ್ರ ಸಾಕು ಕುಂದಾ ನೆನಪಿಗೆ ಬರ್ತದ. ಹಂಗ ಇಲ್ಲಿನ ನೀರು, ರಸ್ತೆ, ದಾರಿಬದಿ ತಿಂಡಿ ಅಂಗಡಿಗಳು ಭಾಳ ಖುಷಿ ಕೊಡತಾವ. ಕಿರ್ಲೋಸ್ಕರ್ ರಸ್ತಾದಾಗ ಹೋದ್ರ ನಮಗ ಬೆಂಗಳೂರ್ನಾಗಿನ ಎಂ.ಜಿ.ರೋಡ ನೆನಪಾಗ್ತದ. ಹಂಗ ಬೆಳಗಾವಿಯೊಳಗ ಅನ್ನಿಸ್ತಾದ. ಕಿರ್ಲೊಸ್ಕರ ರೋಡನಾಗಿನ ಈ ಬಿಲ್ಡಿಂಗು ಬಿಗ್ ಸಿನೆಮಾ ಹಾಲ್. ಮಲ್ಟಿಪ್ಲೆಕ್ಸ್.

ಶನಿವಾರ, ಏಪ್ರಿಲ್ 16, 2011

ಬೆಳಗಾವಿ ಜಿಲ್ಲೆಯ ಅಧಿಕಾರಿಗಳು

HQ

Name

Phone (O)

Mobile

Fax

E-Mail

ADC/HQA

Belgaum

Shri P.S. Mallapur

0831-2407275

94492-21111

0831-2452644

hqadcbgm@gmail.com

AC

Belgaum

Shri. Vijay Mahantesh B.D.

0831-2407284

99451-89085

0831-2407284

acbelgaum@gmail.com

Bailhongal

Shri. V.B. Dammannavar

08288-233160

94483-23859

08288-233160

acblhbgm@gmail.com

Chikkodi

Shri. P.N.Ravindra

08338-272132

94497-45999

08338-272132

ac.chikodi@gmail.com

Tahasildar

Athani

Shri.S.Koteppagol

08289-251146

94802-39779

08289-251146

tah_atn@yahoo.in

Bailhongal

Shri. Lokesh

08288-233152

99868-86348

08288-233152

tahsildar.blh@gmail.com

Belgaum

Shri.A.H.Alur

0831-2407286

94486-37465

0831-2407286

tahsildarbgm@gmail.com

Chikkodi

Shri. Ramesh Desai

08338-272130

94804-87942

08338-272130

tahr_ckd@rediffmail.com

Gokak

Shri. Audram

08332-225073

94495-35101

08332-225073

tahasildargkk@gmail.com

Hukkeri

Shri. A.I.Akkiwat

08333-265036

94811-08310

08333-265036

tahsildar.hukkeri@gmail.com

Khanapur

Shri. B.D.Gugartti

08336-222225

94484-53789

08336-222225

tahasildarknp@gmail.com

Raibag

Shri. Praveen Bagewadi

08331-225247

99452-06854

08331-225247

tahasildarrbg@gmail.com

Ramdurg

Smt: Geeta Koulagi

08335-242162

94489-33533

08335-242162

tahashildarrmd@gmail.com

Soudatti

Smt. Sharada C.K.

08330-222223

94499-73463

08330-222223

tahashildarsaundattieln@yahoo.in

Special Tahasildar

Kittur

Smt: S.S.Ballari

----

94485-36338

-----

-------

Nippani

Sri Nanawate

----

97400-95899

-----

-------

ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು

Elected Members

Member of Parliament

Name

Constituency

Ramesh V Katti

01-Chikkodi Parliamentary Constituency

Suresh Channabasappa Angadi

02-Belgaum Parliamentary Constituency

Anant Kumar Hegde

12-U.Kannad Parliamentary Constituency

Member of Legislative Assembly

Name

Constituency

KAKASO PANDURANG PATIL

01- NIPPANI

HUKKERI PRAKASH BABANNA

02- CHIKKODI-SADALGA

LAXMAN SANGAPPA SAVAD

03- ATHANI

BHARAMGOUDA ALAGOUDA KAGE

04- KAGWAD

GHATAGE SHAMA BHIMA

05- KUDACHI

AIHOLE DURYODHAN MAHALINGAPPA

06- RAYBAG

UMESH VISHWANATH KATTI

07- HUKKERI

BALACHANDRA LAXMANRAO JARAKIHOLI

08- ARABHAVI

JARKIHOLI RAMESH LAXMANRAO

09- GOKAK

JARAKIHOLI SATISH LAXMANARAO

10- YAMAKANAMARADI

FEROZ NURUDDIN SAIT

11- BELGAUM UTTAR

ABHAY PATIL

12- BELGAUM DAKSHIN

SANJAY B PATIL

13- BELGAUM RURAL

PRALHAD REMANI

14- KHANAPUR

MARIHAL SURESH SHIVARUDRAPPA

15- KITTUR

METGUD VIRUPAXI (JAGADISH) CHANNAPPA

16- BAILHONGAL

MAMANI VISHWANATH CHANDRASHEKAR

17- SAUNDATTI YELAMMA

ASHOK MAHADEVAPPA PATTAN

18- RAMDURGA


ಬೆಳಗಾವಿ ವಸತಿ ಗೃಹಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ವಿವರ

ಹೋಟೆಲ್ ಹೆಸರು ದೂರವಾಣಿ ಸಂಖ್ಯೆ STD CODE 0831

1 ಸರ್ಕ್ಯೂಟ ಹೌಸ್ 2420350

2 ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಗೆಸ್ಟ ಹೌಸ್ 2405468/2405458

3 ಹೋಟೆಲ್ ಸನ್ಮಾನ 2420777/2430777

4 ಹೋಟೆಲ್ ಮಿಲನ್ 2425555

5 ಹೋಟೆಲ್ ಕೀರ್ತಿ 2466999

6 ಹೋಟೆಲ್ ಆದರ್ಶ ಪ್ಯಾಲೇಸ್ 2435777

7 ಹೋಟೆಲ್ ಸಂಕಮ್ 2455838

8 ಹೋಟೆಲ್ ರಾಮದೇವ್ 2470132

9 ಹೋಟೆಲ್ ಶಿವಾ 2474945

10 ಹೋಟೆಲ್ ಅತಿಥಿ 2476764

11 ಹೋಟೆಲ್ ಸುಖಸಾಗರ 2473311

12 ಹೋಟೆಲ್ ರೋಹನ್ ರೆಸಿಡೆನ್ಸಿ 4203325

13 ಹೋಟೆಲ್ ಸಂಕಂ ಇಂಟರ್ ನ್ಯಾಶನಲ್ 2455526

14 ಹೋಟೆಲ್ ಈಫಾ 2498777

15 ಹೋಟೆಲ್ ಅನುಪಮ 2422834

16 ಹೋಟೆಲ್ ಸತ್ಕಾರ 2461644

17 ಹೋಟೆಲ್ ವೃಂದಾವನ 2421777

18 ಹೋಟೆಲ್ ಶೀತಲ್ 2429222

19 ಸೂರ್ಯಾ ೨೪೮೯೧೫೧


ಕ್ಫ್ರಪೆ : ಎನ್ ಅಯ್ ಸಿ

ಬುಧವಾರ, ಮಾರ್ಚ್ 30, 2011

ನಮ್ಮ ಬೆಳಗಾವಿ ನಿಮಗೆಷ್ಟು ಗೊತ್ತು?


ಬೆಳಗಾವಿ

ಉತ್ತರ ಕರ್ನಾಟಕ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊ೦ದು. ರಾಜ್ಯದ ಎರಡನೇ ರಾಜಧಾನಿ ಎ೦ದು ನೇಮಿಸಲ್ಪಟ್ಟ ಮಹಾನಗರ (ಆ೦ಗೀಕಾರವಾಗಿಲ್ಲ).ಇಂದಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪೆನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ.






























ಚರಿತ್ರೆ

ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ. ಈ ಜಿಲ್ಲೆಯ ಅತಿ ಪ್ರಾಚೀನ ಸ್ಥಳ ಎಂದರೆ ಹಲಸಿ - ಉಪಲಬ್ಧವಾಗಿರುವ ತಾಮ್ರಶಾಸನಗಳ ಆಧಾರದ ಮೇಲೆ ಹಲಸಿ ಕೆಲವು ಕದಂಬ ವಂಶದ ಅರಸರ ರಾಜಧಾನಿಯಾಗಿದ್ದಿತೆಂದು ಊಹಿಸಲಾಗಿದೆ. ೬ ನೇ ಶತಮಾನದಿಂದ ಸುಮಾರು ಕ್ರಿ.ಶ. ೭೬೦ ರ ವರೆಗೆ ಈ ಸ್ಥಳ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದು, ನಂತರ ರಾಷ್ಟ್ರಕೂಟ">ರಾಷ್ಟ್ರಕೂಟರ ನಿಯಂತ್ರಣಕ್ಕೆ ಸಾಗಿತು. ರಾಷ್ಟ್ರಕೂಟರ ಶಕ್ತಿ ಕಡಿಮೆಯಾದ ನಂತರ ರತ್ತ ವಂಶದ (೮೭೫ - ೧೨೫೦)ಕೈಯಲ್ಲಿದ್ದ ವೇಣುಗ್ರಾಮ, ೧೨೧೦ ರ ನಂತರ ರಾಜಧಾನಿಯಾಯಿತು. ೧೨೫೦ ರ ನಂತರ ದೇವಗಿರಿಯ ಯಾದವ">ಯಾದವರು ಈ ಪ್ರದೇಶವನ್ನು ಸ್ವಲ್ಪ ಕಾಲ ಆಳಿದರು. ೧೩೨೦ ರಲ್ಲಿ ದೆಹಲಿಯ ಸುಲ್ತಾನೇಟ್ ಗಳ ಕೈಯಲ್ಲಿ ಯಾದವರು ಸೋಲನುಭವಿಸಿದ ನಂತರ ಸ್ವಲ್ಪ ಕಾಲ ದೆಹಲಿಯ ಆಡಳಿತದಲ್ಲಿ ಬೆಳಗಾವಿ ಜಿಲ್ಲೆ ಇತ್ತು. ಆದರೆ ಕೆಲವೇ ವರ್ಷಗಳ ನಂತರ ವಿಜಯನಗರ ಸಾಮ್ರಾಜ್ಯ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆಯ ಉತ್ತರದ ಭಾಗಗಳು ೧೩೪೭ ರಲ್ಲಿ ಬಹಮನಿ ಸುಲ್ತಾನರ ಕೈ ಸೇರಿದವು. ೧೪೭೩ ರಲ್ಲಿ ಬೆಳಗಾವಿ ಪಟ್ಟಣ ಮತ್ತು ಜಿಲ್ಲೆಯ ಉಳಿದ ಭಾಗಗಳನ್ನು ಸಹ ಬಹಮನಿ ಸುಲ್ತಾನರು ಗೆದ್ದರು. ಬಿಜಾಪುರದ ಸುಲ್ತಾನರನ್ನು ಔರಂಗಜೇಬ್ ೧೬೮೬ ರಲ್ಲಿ ಸೋಲಿಸಿದ ಮೇಲೆ ಸ್ವಲ್ಪ ಕಾಲ ಬೆಳಗಾವಿ ಮುಘಲ್">ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೭೭೬ ರಲ್ಲಿ ಹೈದರ್ ಅಲಿ">ಹೈದರ್ ಅಲಿ ಈ ಪ್ರದೇಶವನು ಗೆದ್ದರೂ ಬ್ರಿಟಿಷರ ಸಹಾಯದಿಂದ ಮರಾಠಾ ಪೇಶ್ವೆ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಪೇಶ್ವೆಗಳು ಈ ಪ್ರದೇಶವನ್ನು ಗೆದ್ದರು. ೧೮೧೮ ರಲ್ಲಿ ಬ್ರಿಟಿಷರ ಆಡಳಿತಕ್ಕೆ ಸಾಗಿದ ಬೆಳಗಾವಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ೧೮೩೬ ರಲ್ಲಿ ಈ ಜಿಲ್ಲೆಯನ್ನು ಎರಡು ಭಾಗವಾಗಿ ಮಾಡಿ ಉತ್ತರ ಭಾಗವನ್ನು ಬೆಳಗಾವಿ ಜಿಲ್ಲೆಯಾಗಿ ಮಾಡಲಾಯಿತು.೧೯೪೭ ರಲ್ಲೆ ಭಾರತ ಸ್ವಾ೦ತ೦ತ್ರ್ಯಪಡೆದ ನ೦ತರ ಬೆಳಗಾವಿ ಮು೦ಬೈ ರಾಜ್ಯದ ಭಾಗವಯಿತು ಆದರೆ ೧೯೫೬ ರಲ್ಲಿ ನಡೆದ ರಾಜ್ಯಗಳ ಮರುವಿ೦ಗಡನಾ ಕಾಯ್ದೆಯ ಪ್ರಕಾರ ಬೆಳಗಾವಿಯನ್ನ ಆಗಿನ ಮೈಸೂರು ರಾಜ್ಯಕ್ಕೆ ಸೆರಿಸಲಾಯಿತು ನ೦ತರ ೧೯೭೨ ರಲ್ಲಿ ಮೈಸೂರು ಕರ್ನಾಟಕ ರಾಜ್ಯವಾದ ನ೦ತರ ಬೆಳಗಾವಿ ಕರ್ನಾಟಕದ ಭಾಗವಾಗಿ ಮು೦ದುವರಿಯಿತು.

ಬೆಳಗಾವಿ ಜಿಲ್ಲೆಯಲ್ಲಿರುವ ಕಿತ್ತೂರು ಚಾರಿತ್ರಿಕವಾಗಿ ಪ್ರಸಿದ್ಧ. ಕಿತ್ತೂರು ಚೆನ್ನಮ್ಮ">ಕಿತ್ತೂರು ರಾಣಿ ಚೆನ್ನಮ್ಮ ಚರಿತ್ರೆಯಲ್ಲಿ ಸಾಹಸ ಮತ್ತು ಧೈರ್ಯದ ಪ್ರತೀಕವಾಗಿದ್ದಾಳೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಬೆಳಗಾವಿಯ ಇನ್ನೊಬ್ಬ ಪ್ರಸಿದ್ಧ ವ್ಯಕ್ತಿಯೆಂದರೆ ಸಂಗೊಳ್ಳಿ ರಾಯಣ್ಣ.

ಸ್ವಾ೦ತ೦ತ್ರ್ಯ ಪೂರ್ವ ಭಾರತದ ಇತಿಹಾಸದಲ್ಲು ಬೆಳಗಾವಿ ತನ್ನದೇ ಆದ ಪಾತ್ರವನ್ನ ಹೊ೦ದಿತ್ತು. ಡಿಸೆ೦ಬರ್ ೧೯೨೪ ರಲ್ಲಿ ಮಹಾತ್ಮ ಗಾ೦ಧೀಜಿಯವರ ನೇತೃತ್ವದಲ್ಲಿ ೩೯ ನೇ ಭಾರತೀಯ ಕಾ೦ಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು.

ಭೌಗೋಳಿಕ ಲಕ್ಷಣಗಳು

ಬೆಳಗಾವಿ ನಗರ ಸಮುದ್ರ ಮಟ್ಟದಿ೦ದ ೨೫೦೦ ಅಡಿ (೭೬೨ ಮೀ)ಎತ್ತರದಲ್ಲಿದೆ. ರಾಜಧಾನಿ ಬೆ೦ಗಳೂರಿನಿ೦ದ ೫೦೧ ಕಿಮೀ ದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿ ನೆಲೆಸಿದ್ದು ಇತರ ನೆರೆ ರಾಜಧಾನಿಗಳಾದ ಮು೦ಬೈನಿ೦ದ ದಕ್ಷಿಣಕ್ಕೆ ೫೫೦ ಕಿಮೀ ಹೈದರಾಬಾದನಿ೦ದ ಪಶ್ಛಿಮಕ್ಕೆ ೬೧೪ ಕಿಮೀ ಹಾಗು ಗೋವಾ ರಾಜಧಾನಿ ಪಣಜಿಯಿ೦ದ ೧೫೯ ಕಿಮೀ ದೂರದಲ್ಲಿದೆ. ಸಹ್ಯಾದ್ರಿಯ ಮಡಿಲಲ್ಲಿ ಹಾಗು ಸಮಿಪದ ಅರಬ್ಬಿ ಸಮುದ್ರದಿ೦ದ ಕೇವಲ ೧೦೦ ಕಿಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಒ೦ದು ಸು೦ದರ ನಗರ.

ಪ್ರತಿಕೂಲ ಹವಾಮಾನ, ಉತ್ತಮ ಮಳೆ, ಸಮೀಪದ ದಟ್ಟವಾದ ಅರಣ್ಯ ಜಿಲ್ಲೆಯ ಪ್ರಮುಖ ಲಕ್ಷಣಗಳು. ಕ್ರುಷ್ಣ, ಘಟ್ಟಪ್ರಭೆ, ಮಲಪ್ರಭ, ಮಾರ್ಖ೦ಡೇಯ, ಹಿರಣ್ಯಕೇಶಿ, ದೂದಗ೦ಗೆ-ವೆದಗ೦ಗೆ ಜಿಲ್ಲೆಯ ಪ್ರಮುಖ ನದಿಗಳು. ರಾಕಸಕೊಪ್ಪ ಜಲಾಶಯ,ಹಿಡಕಲ್ ಜಲಾಶಯ ಹಾಗು ನವಿಲುತೀರ್ಥ ಜಲಾಶಯಗಳು ಜಿಲ್ಲೆಗೆ ಒಳಪಟ್ಟಿವೆ.

ಸ೦ಸ್ಕೃತಿ

ವೈವಿದ್ಯತೆಗಳಲ್ಲಿ ಏಕತೆಯನ್ನು ಹೊ೦ದಿರುವ ಭಾರತದ೦ತೆ ಬೆಳಗಾವಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮಿಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿ೦ದಿ(ಕೇವಲ ನಗರದಲ್ಲಿ), ಮರಾಠಿ(ಕೇವಲ ನಗರದಲ್ಲಿ) ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಷೇಶತೆ.

ಆರ್ಥಿಕತೆ, ಉದ್ಯಮಗಳು ಹಾಗು ವ್ಯಾಪಾರ ವಿಭಾಗ ಸಂಪಾದಿಸಿ">ಆರ್ಥಿಕತೆ, ಉದ್ಯಮಗಳು ಹಾಗು ವ್ಯಾಪಾರ

ಬೆಳಗಾವಿ ಉತ್ತರ ಕರ್ನಾಟಕದ ವಾಣಿಜ್ಯ ಕೇ೦ದ್ರ. ತರಕಾರಿ, ಮೀನು, ಪೀಠೊಪಕರಣಗಳು, ಮರದ ದಿಮ್ಮೆಗಳು ಹಾಗು ಖನಿಜ ಅದಿರುಗಳಿಗೆ ಉತ್ತಮ ಮಾರುಕಟ್ಟೆ. ಬಾಕ್ಸೈಟ ಅದಿರು ಹೇರಳವಾಗಿ ದೊರುಕುವದರಿ೦ದ ಬೆಳಗಾವಿಯಲ್ಲಿ ಅಲ್ಯುಮಿನಿಯ೦ ಉತ್ಪಾದನಾ ಕೈಗಾರಿಕೆಯೊ೦ದು (Hindalco Industries)ಭಾರಿ ಪ್ರಮಾಣದ ಅಲ್ಯುಮಿನಿಯ೦ ಉತ್ಪಾದಿಸುತ್ತದೆ. ಇತ್ತಿಚಿನ ದಿನಗಳಲ್ಲಿ ಸಮೀಪದ ದೇಶನೂರ ಎ೦ಬಲ್ಲಿ ಯುರೇನಿಯ೦ ಅದಿರು ಕೂಡ ದೊರೆತಿದೆ. ರಾಜಧಾನಿ ಬೆ೦ಗಳೂರಿನ೦ತೆ ಇಲ್ಲಿಯೂ ಐಟಿ ಉದ್ಯಮ ಬೆಳೆಯುತ್ತಿದೆ. ಮೂಲತಹ ಬೆಳಗಾವಿಯಲ್ಲೆ ಆರ೦ಭಗೊ೦ಡು ವಿಶ್ವದಾದ್ಯ೦ತ ಸೇವೆ ಸಲ್ಲಿಸುತ್ತಿರುವ ಹಲವಾರು ಕ೦ಪೆನಿಗಳು ಇಲ್ಲಿವೆ.

  • BTP Infoserve
  • KTwo technology Solutions
  • Belgaum IT Online
  • Conquest Infotech & Software Services
  • CBay Systems & Software
  • E Quest
  • E-softzone Technologies (INDIA)
  • Gokul Scribes
  • Inventica Tehcnologies
  • I-Source Belgaum
  • Katwa Infotech
  • People-tree
  • Prosoft
  • Rachna Soft Ltd
  • Leading Minds
  • Vayavya Labs
  • G5 Solutons Ltd
  • Deltra Softwares


೧೯೭೦ ರಿ೦ದ ಈಚೆ ಬೆಳಗಾವಿಯಲ್ಲಿ ಉದ್ಯಮಗಳ ಬೆಳವಣಿಗೆಯಾಯಿತು. ಮಶಿನ್ ಟೂಲ್ಸ ಹೈಡ್ರೊಲಿಕ್ ಉತ್ಪನ್ನಗಳು , ಕಾಸ್ಟಿ೦ಗ , ಫೊರ್ಜಿ೦ಗನ೦ತಹ (forging)[೪] ನೂರಾರು ಉದ್ಯಮಗಳು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಾಹನ ಉದ್ಯಮದ ಬಿಡಿಭಾಗಗಳು(Automotive Manufacturing), ಮುಖ್ಯವಾಗಿ ಕ್ರ್ಯಾ೦ಕ್ ಶಾಪ್ಟ (Crank-shaft)ನ೦ತಹ ವಸ್ತುಗಳ ತಯಾರಿಕಾ ಉದ್ಯಮಗಳು ಇಲ್ಲಿ ಕೇ೦ದ್ರಿಕೃತವಾಗಿವೆ. ಇತ್ತೀಚಿಗಷ್ಟೆ ಬೆಳಗಾವಿಯಲ್ಲಿ ವೈಮಾನಿಕ ತ೦ತ್ರಜ್ನಾನಕ್ಕೆ ಸ೦ಭ೦ಧಪಟ್ಟ೦ತೆ ಹೊಸ ಉದ್ಯಮವೊ೦ದು (Quest engineering)[೫] [೬] ಕಾರ್ಯಾರ೦ಭ ಮಾಡಿದೆ. ಈ ಉದ್ಯಮ ವೈಮಾಣಿಕ ತ೦ತ್ರಜ್ನಾಕ್ಕೆ ಸ೦ಭ೦ದಪಟ್ಟ೦ತೆ ನಮ್ಮ ದೇಶದಲ್ಲೆ ಮೊದಲು ಸ್ಥಾಪನೆಯಾದ ಉದ್ಯಮ ಎನ್ನಲಾಗಿದೆ. ಇದಲ್ಲದೆ ರವಿವಾರ ಪೇಟೆಯ೦ತಹ ಇತರ ಮಾರುಕಟ್ಟೆಗಳು ಗ್ರಹೋಪಯೊಗಿ ವಸ್ತುಗಳಿಗೆ ಉತ್ತಮ ವ್ಯಾಪಾರ ಕಲ್ಪಿಸಿವೆ.

ಹಾಗು ವಿದ್ಯಾ ಸ೦ಸ್ಥೆಗಳು

ಬೆಳಗಾವಿ ಕರ್ನಾಟಕದ ಒ೦ದು ಪ್ರಮುಖ ವಿದ್ಯಾ ಕೇ೦ದ್ರ. ೮ ಅಭಿಯಾ೦ತ್ರಿಕ ಕಾಲೇಜುಗಳು(engineering colleges),೨ ವೈದ್ಯಕೀಯ ಮಹಾವಿದ್ಯಾಲಯಗಳು , ಕೆಲವು ದ೦ತ ವಿದ್ಯಾಲಯಗಳು ಸೇರಿದ೦ತೆ ಹಲವಾರು ವಿದ್ಯಾಸ೦ಸ್ಥೆಗಳು ಇಲ್ಲಿವೆ.ಇಲ್ಲಿರುವ ವಿಶ್ವೇಶ್ವರಯ್ಯ ತಾ೦ತ್ರಿಕ ವಿಶ್ವವಿದ್ಯಾಲಯ ಕರ್ನಾಟಕದ ಅತೀ ದೊಡ್ಡ ವಿಶ್ವವಿದ್ಯಾಲಯವಾಗಿದೆ, ಸುಮಾರು ೧೪೦ ಕ್ಕೂ ಅಧಿಕ ತಾ೦ತ್ರಿಕ ವಿದ್ಯಾಲಯಗಳು ಈ ವಿಶ್ವವಿದ್ಯಾಲಯದ ಅಧಿನದೊಳಗೆ ಕಾರ್ಯನಿರ್ವಹಿಸುತ್ತವೆ ಅಲ್ಲದೆ ಸ್ನಾತಕೋತ್ತರ ವಿಭಾಗದಲ್ಲಿ M-Tech,MCA ನ೦ತಹ ಪದವಿಗಳು ಕೂಡ ವಿ ತಾ ವಿ ಅಧಿನದಲ್ಲಿವೆ.ಇದಲ್ಲದೆ ಇತರೆ ಪದವಿ ಕಾಲೇಜುಗಳು,ಪಾಲಿಟೆಕ್ನಿಕ್ ವಿದ್ಯಾಲಯಗಳು, ಕಾನೂನು ಮಹಾವಿದ್ಯಾಲಯಗಳು ಕೂಡ ಇಲ್ಲಿವೆ. ಕೆ ಎಲ್ ಇ , ಕೆ ಎಲ್ ಎಸ್, ಗೋಮಟೆಶ , ಭರತೇಶ ಹಾಗು ಮರಾಠ ಮ೦ಡಳದ೦ತಹ ಹಲವಾರು ವಿದ್ಯಾಸ೦ಸ್ಥೆಗಳು ಸಾಕಷ್ಟು ಶೈಕ್ಷಣಿಕ ವಿದ್ಯಲಯಗಳನ್ನು ನಡೆಸುತ್ತಿವೆ.

ಕೆ ಎಲ್ ಇ ಸ೦ಸ್ಥೆ (ಕರ್ನಾಟಕ ಲಿಂಗಾಯತ್ ಎಜುಕೇಶನ್ ಸೊಸೈಟಿ)

ಇಸ್ವಿ ೧೯೧೬ ರಲ್ಲಿ ಏಳು ಜನ ಸಪ್ಥರ್ಷೀಗಳಿ೦ದ ಪ್ರಾರ೦ಭವಾದ ಈ ಸ೦ಸ್ಥೆ ಇ೦ದು ವಿಶ್ವದಾದ್ಯ೦ತ ಹಲವಾರು ವಿದ್ಯಾಸ೦ಸ್ಥೆಗಳನ್ನು ನಡೆಸುತ್ತಿದೆ.ನವ೦ಬರ ೧೩,೧೯೧೬ ರಲ್ಲಿ ಕೆ ಎಲ್ ಇ ಸ೦ಸ್ಥೆ ಇ೦ದಿನ ಗಿಲಗ೦ಚಿ ಅರಟಾಳ ಪ್ರೌಢಶಾಲೆ ಹಾಗು ಪದವಿಪೂರ್ವ ಕಾಲೇಜ ನ್ನು ಆರ೦ಭಿಸಿತು.ಇದೇರೀತಿ ೧೯೩೩ ರ ಜೂನ್ ನಲ್ಲಿ ಲಿ೦ಗರಾಜ ಕಾಲೇಜ್ ,

KLE MC

೧೯೪೭ರಲ್ಲಿ ಹುಬ್ಬಳ್ಳಿಯ ಬಿ,ವಿ ಭೂಮರಡ್ಡಿ ತಾ೦ತ್ರಿಕ ಮಹಾವಿದ್ಯಾಲಯ,೧೯೬೩ ರಲ್ಲಿ ಬೆಳಗಾವಿಯ ಜವಾಹರ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಹಾಗು ಹಾವೇರಿಯ ಜಿ,ಎಚ್ ಕಾಲೇಜ್ ಆರ೦ಭವಾದವು. ೧೯೮೪ ರಿ೦ದ ಈಚೆಗೆ ವೈದ್ಯಕೀಯ,ದ೦ತ ವೈದ್ಯಕೀಯ,ಮಾಹಿತಿ ತ೦ತ್ರಜ್ನಾನ,ಕ೦ಪ್ಯೂಟರ ತ೦ತ್ರಜ್ನಾನ,ಹೊಟೆಲ್ ಮ್ಯಾನೇಜಮೆ೦ಟ,ಬ್ಯುಸಿನೆಸ್ ಮ್ಯಾನೇಜಮೆ೦ಟ,ಪ್ಯಾಶನ್ ಡಿಸೈನಿ೦ಗ,ಕ್ರುಷಿ ವಿದ್ಯಾಲಯಗಳು ಹಾಗು ಇತರ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಿಗೂ ವಿಸ್ತಾರವಾಗಿ ಇ೦ದು ಶ್ರೀ ಪ್ರಭಾಕರ ಕೋರೆಯವರ ನೇತ್ರುತ್ವದಲ್ಲಿ ೨೦೦ ಕ್ಕಿ೦ತಲೂ ಹೆಚ್ಚಿನ ಶೈಕ್ಷಣಿಕ ವಿದ್ಯಾಲಯಗಳನ್ನು ಒಳಗೊ೦ಡಿದೆ

ತಾಲೂಕುಗಳು

ಪ್ರೇಕ್ಷಣೀಯ ಸ್ಥಳಗಳು ಮತ್ತು ಆಕರ್ಷಣೆಗಳು

  • ಹಳೆಯ ಕಲ್ಲಿನ ಕೋಟೆ (೧೫೧೯ ರಲ್ಲಿ ಕಟ್ಟಿದ್ದೆಂದು ನಂಬಲಾಗಿದೆ)
  • ಕೋಟೆ ಕೆರೆ
  • ವೀರ ಸೌಧ
  • ಕಮಲ ಬಸದಿ

ಕೋಟೆ ಕೆರೆಯ ದೃಷ್ಯ

  • ಸ್ವಾಮಿ ವಿವೇಕಾನಂದ ಆಶ್ರಮ
  • ಕಪಿಲೇಶ್ವರ ದೇವಸ್ಥಾನ
  • ಹಿಡಕಲ್ ಜಲಾಶಯ
  • ಮುನವಳ್ಳಿಯ ನವಿಲುತೀರ್ಥ ಜಲಾಶಯ
  • ಮೂಡಲ್ಗಿಯ ಕಬ್ಬು ಮಾರುಕಟ್ಟೆ
  • ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ತಾನ
  • ಗೋಕಾಕ್ ಜಲಪಾತ - ಘಟಪ್ರಭಾ ನದಿಯ ಜಲಪಾತ + ಗೊಡಚಿನಮಲ್ಕಿ ಜಲಪಾತ

ಭಾಷೆಗಳು

ಬೆಳಗಾವಿ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಮುಖ್ಯ ಭಾಷೆಗಳು ಕನ್ನಡ, ಮತ್ತು ಮಹಾರಾಷ್ಟ್ರದ ಸಾಮೀಪ್ಯದಿಂದಾಗಿ ಮರಾಠಿ, ಈ ಎರಡು ಭಾಷೆಗಳಲ್ಲದೆ ಸಾಮನ್ಯವಾಗಿ ಹಿ೦ದಿ ಹಾಗು ಕೊ೦ಕಣಿ ಭಾಷೆಗಳು ಕೂಡ ಇಲ್ಲಿ ಮಾತನಾಡಲ್ಪಡುತ್ತವೆ .